Sunday, January 06, 2008

My Kannada Blog: ನನ್ನ ಕನ್ನಡ ಬರಹಗಳು

From today on, you can view my Kannada Write-ups on this link... Keep locked:
http://badekkila.wordpress.com
will keep you updated about the posts there too!
This is the first post out there:
ಸಂಜೆಯ ತಂಗಾಳಿಗೆ ಸುಮ್ಮನೆ ಹಾಗೆ ಬೆಟ್ಟದ ತುದಿಯಲ್ಲಿ ಕುಳಿತುಕೊಳ್ಳೋದು, ಹಾಗೆ ಬೀಸುತ್ತಿರುವ ಗಾಳಿಗೆ ಮನಸ್ಸನ್ನು ಕೂಡ ತೋಯಿಸುವುದು … ಇದೆಲ್ಲ ಎಂದೋ ಕಂಡ ಕನಸನ್ನ ಮತ್ತೆ ಕೆದಕಿದ ಹಾಗಿದೆ… ಸಂಜೆಗೆ ಪೇಟೆಯ ಜೋರಿನ ಕೆಲಸಕ್ಕಿಂತ ಜಾಸ್ತಿ ರೂಪಗಳಿವೆ ಅನ್ನೋದೂ ಮರೆತಂತಿದೆ ನನಗೆ… ಇಲ್ಲ… ಈ ಪೇಟೆಯ ಮಂದಿಗೆ… ನಾನೂ ಈ ಪೇಟೆಯ ಮಂದಿಯಲ್ಲಿ ಒಬ್ಬನಾಗಿಬಿಟ್ಟಿದ್ದೇನೆ…
ಇದು ದೂರದ ಬೆಟ್ಟ ನುಣ್ಣಗಿದೆ ಅನ್ನೋ ಕಥೆಯ ಮುಂದುವರೆದ ಭಾಗ ಅಂತ ಭಾವಿಸಿದ್ದರೆ ಕ್ಷಮೆ ಇರಲಿ… ಈ ಪ್ರದೀಪನ ಮನಸ್ಸಿನಲ್ಲಿ ಮಾತುಗಳು ಹೀಗೇ ಬರೋದು… May be ಅದನ್ನು ಬದಲಾಯಿಸುವುದೂ ಇಷ್ಟ ಇಲ್ಲ… ಆದ್ರೆ… ಮನಸ್ಸಿಗೆ ಏನು ತೋಚೊತ್ತೋ, ಅದನ್ನು ಸುಮ್ಮನೆ ಅಲ್ಲೇ ಇಟ್ಟಿರುವುದಕ್ಕಿಂತ ಹೊರ ಹಾಕೋದಕ್ಕೆ ಈ ವೇದಿಕೆ ಸಿಕ್ಕಂತಿದೆ…ಆ ದೂರದ ಬೆಟ್ಟದಲ್ಲಿ ವಿಹಾರಕ್ಕೆ ನನ್ನ ಮನಸ್ಸು ತೆರಳಿದಾಗ… ಬಾಲ್ಯದ ಆ ದಿನಗಳಿಗೆ, ಅದರ ಪುಟ್ಟ ಪುಟ್ಟ ಪುಟಗಳಿಗೆ ಮನ ಹಾದಾಗ… ನಿಮ್ಮಲ್ಲಿಗೆ ಬಂದೇ ಬರ್ತೀನಿ… ಈ ಹುಚ್ಚನಿಗೆ… ಅಲ್ಲಲ್ಲ ಹುಚ್ಚುತನಕ್ಕೆ ನೀವೂ ಸಾಕ್ಷಿಯಾಗಿ!

1 comment:

  1. ಬದುಕಿನ ವಿಹಾರದಲ್ಲಿ ಮೊಗೆದಷ್ಟು ಬತ್ತದ ಕನಸುಗಳಿರಲಿ..ಆದರೆ ಹುಚ್ಚನಾಗೋದು ಬೇಡಪ್ಪಾ..
    ಚೆನ್ನಾಗಿ ಬರೀತೀರ..ಶುಭಹಾರೈಕೆಗಳು

    ReplyDelete