Long time since I have appeared here and this particular post is also long overdue!
Kannada Rajyotsvava was on the 1st of November and this particular song had been done for the same reason. But still, since this is still November month, I deem it fit to put it up RIGHT NOW here.
:)
Please watch the video given below for which I have written the lyrics.
Hope you enjoy the song and write back to me.
I have given the lyrics of the same in Kannada. will try and put up the translation of the same soon.
http://www.youtube.com/watch?v=XgLiZETPRig
ಕನ್ನಡ
ನಾವಿರುವ ನಾಡು ಕರ್ನಾಟಕ
ಎಲ್ಲೆಲ್ಲಿಯೂ ನೋಡು ಮನಮೋಹಕ
ಹೆಮ್ಮೆ ತರೋ ನುಡಿಯು ಈ ಕನ್ನಡ
ಶಕ್ತಿ ಕೊಡೋ ಮಾತು ಸಿರಿಗನ್ನಡ
ನಮ್ಮ ರೋಮ ರೋಮ ರೋಮದಲ್ಲೂ ಕನ್ನಡದಾ ನುಡಿಯು
ನಾಡಿನ ಎಲ್ಲೇ ಹೋಗಿ ನೋಡು ಕನ್ನಡ ಕೇಳುವುದು
ನಾಳಿನ ಬದುಕಿನ ಹಾಡಿಗೆ ಪಲ್ಲವಿ ಬರೆಯಬೇಕಿದೆ
ನಿನ್ನೆಯ ಕನಸು ಇಂದಿಗೆ ನನಸು ಮಾಡಬೇಕಿದೆ
ನೆಚ್ಚಿನ ನೆಲದ ಹಸಿರಿಗೆ ಉಸಿರು ನೀಡಬೇಕಿದೆ
ಕನ್ನಡದಾ ಮಾತನ್ನು ನುಡಿಯುವಾ ಎಂದೆಂದೂ
ಬೆಂಗಳೂರು ಮೈಸೂರು ಮಂಗಳೂರು ಧಾರವಾಡ
ಪ್ರತಿ ದಿಕ್ಕಲ್ಲೂ ಪಸರಿಸಿದೆ ಕನ್ನಡದಾ ಗಂಧ
ಪ್ರತಿ ಊರು ಪ್ರತಿ ಹಳ್ಳಿ ಎಲ್ಲರೆದೆ ಗೂಡಲ್ಲಿ
ಕ್ಷಣ ಕ್ಷಣವೂ ಗುನುಗುಡುವ ಮಾತೇ ಬಲುಚಂದ!
ಕನ್ನಡ ಉಸಿರುಸಿರಲು ಕನ್ನಡ
ಕನ್ನಡ ಪ್ರತಿ ಮಾತಲು ಕನ್ನಡ
ಕನ್ನಡ ಜೀವ ಹೋದರು ಕೇಳಲಿ ಕನ್ನಡ
ಕನ್ನಡ ಇದ ಬಿಟ್ಟು ಹೇಗಿರಲಿ
ಕನ್ನಡ ಎದೆಯೆತ್ತಿ ನುಡಿಯೋಣ
ಕನ್ನಡ ನಾವಾಡುವ ನುಡಿಯೇ
No comments:
Post a Comment